ಕೊರೋನ ಬೋರಿಯೇಲಿಸ್

 
ಆಕಾಶದ 88 ನಕ್ಷತ್ರ ಪುಂಜಗಳಲ್ಲಿ ಒಂದು. ಉತ್ತರ ಕಿರೀಟ (ನಾರ್ತರ್ನ್ ಕ್ರೌನ್) ಎಂದು ಹೆಸರಿದೆ. ಇದರ ವ್ಯಾಪ್ತಿ ವಿಶುವದಂಶ 15 ಗಂ. 15 ಮಿ- 16 ಗಂ. 25 ಮಿ ಮತ್ತು ಘಂಟಾವೃತ್ತಾಂಶ 26ಲಿ -40ಲಿ  ಉತ್ತರ. ಬೂಟ್‍ಯೀಸ್ ಪುಂಜದ ಸಮೀಪದಲ್ಲಿರುವ 6 ನಕ್ಷತ್ರಗಳ ಕಿರೀಟಾಕಾರದಿಂದ ಈ ಪುಂಜವನ್ನು ಸುಲಭವಾಗಿ ಗುರುತಿಸುವುದು ಸಾಧ್ಯ. 							*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ